ಆನೆಮುಡಿ ಶಿಖರ (ಆನೈಮುಡಿ) ಇದು ಪಶ್ಚಿಮ ಘಟ್ಟ ದ ಅಣ್ಣಾಮಲೈ ಪರ್ವತ ಶ್ರೇಣಿಯಲ್ಲಿರುವ ಒಂದು ಶಿಖರ. ಸಮುದ್ರ ಮಟ್ಟದಿಂದ ೮೮೪೨ ಅಡಿಗಳಷ್ಟು ಎತ್ತರವಿದ್ದು ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರವಾದ ಶಿಖರವಾಗಿದೆ.ಇದು ಕೇರಳ ರಾಜ್ಯದಲ್ಲಿದೆ.